ಗೌರವಾನ್ವಿತ ಸದಸ್ಯರೇ,, ದಿನಾಂಕ 19.07.2026ನೇ ಭಾನುವಾರ ಮಧ್ಯಾಹ್ನ 03.00 ಗಂಟೆಗೆ ನಮ್ಮ ಅಂಗಸಂಸ್ಥೆಯ 27ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಸಭೆಯು ಶ್ರೀ ಗುರುನರಸಿಂಹ ಕಲ್ಯಾಣ ಮಂದಿರ, ನಂ. 12, ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಬೆಂಗಳೂರು–560 004ರಲ್ಲಿ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ. ಕೇಶವ ಹೊಳ್ಳರವರ ಅಧ್ಯಕ್ಷತೆಯಲ್ಲಿ ಕೇಂದ್ರದ ಅಧ್ಯಕ್ಷರಾದ ಹೆಚ್. ಸತೀಶ್ ಹಂದೆಯವರ ಉಪಸ್ಥಿತಿಯಲ್ಲಿ ನಡೆಯಲಿರುವುದು. ಆತ್ಮೀಯರಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗಿ ವಿನಂತಿ. ----- ಕಾರ್ಯಕಾರಿ ಮಂಡಳಿಯ ಪರವಾಗಿ, ಬಿ. ಚಂದ್ರಶೇಖರ ಐತಾಳ್, ಕಾರ್ಯದರ್ಶಿ.
ಆತ್ಮೀಯರೇ, ಕೂಟ ಮಹಾಜಗತ್ತು ಸಾಲಿಗ್ರಾಮ (ರಿ.) ಉತ್ತರಹಳ್ಳಿ ಅಂಗಸಂಸ್ಥೆಯ ಆಶ್ರಯದಲ್ಲಿ ದಿನಾಂಕ 19.07.2026ರ ಭಾನುವಾರ ಸಂಜೆ 4.30 ಗಂಟೆಯಿಂದ ಕೂಟಬಂಧುಗಳ ಶ್ರೇಯೋಭಿವೃದ್ಧಿಗಾಗಿ ವೇ| ಬ್ರ| ಶ್ರೀ ಡಾ|| ಎಂ.ವಸಂತ ಭಟ್ ರವರ ನೇತೃತ್ವದಲ್ಲಿ ಶ್ರೀ ದುರ್ಗಾ ನಮಸ್ಕಾರ ಪೂಜೆಯನ್ನು ಶ್ರೀ ಗುರುನರಸಿಂಹ ಕಲ್ಯಾಣ ಮಂದಿರ, ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಬೆಂಗಳೂರು,ಇಲ್ಲಿ ಏರ್ಪಡಿಸಲಾಗಿದೆ.ಆಗಮಿಸಿದ ಎಲ್ಲಾ ಕೂಟ ಬಂಧುಗಳಿಗೆ ಸಂಕಲ್ಪವನ್ನು ಮಾಡಿಸಲಾಗುವುದು. ----- ಅಧ್ಯಕ್ಷರು, ಕೋಟ ಮಹಾಜಗತ್ತು, ಸಾಲಿಗ್ರಾಮ (ರಿ.) ಉತ್ತರಹಳ್ಳಿ ಅಂಗಸಂಸ್ಥೆ