ದುರ್ಗಾ ನಮಸ್ಕಾರ ಪೂಜೆ (2026)
🙏 ಬನ್ನಿ, ನಮ್ಮತನವನ್ನು ಕಾಯ್ದುಕೊಳ್ಳೋಣ 🙏
"ರೋಗಾನಶೇಷಾನ್ ಅಪಹಂಸಿ ತುಷ್ಟಾ
ರುಷ್ಟಾತು ಕಾಮಾನ್ ಸಕಲಾನಭೀಷ್ಟಾನ್
ತ್ವಾಮಾಶ್ರಿತಾನಾಂ ನ ವಿಪನ್ನರಾಣಾಂ
ತ್ವಾಮಾಶ್ರಿತಾ ಹಿ ಆಶ್ರಯತಾಂ ಪ್ರಯಾಂತಿ"
ಹೇ ದುರ್ಗೇ, ನೀನು ಸಂತುಷ್ಟಳಾದರೆ ಭಕ್ತರ ಎಲ್ಲ ರೋಗಗಳನ್ನೂ ದೂರಮಾಡುವಿ.
ಹಾಗೆಯೇ ಕೋಪಗೊಂಡರೆ ಅವರ ಸರ್ವಕಾಮನೆಗಳನ್ನೂ, ಇಷ್ಟವಾದುದನ್ನೂ ದೂರ ಮಾಡುವಿ.
ನಿನ್ನನ್ನು ಆಶ್ರಯಿಸಿದವರಿಗೆ ಯಾವುದೇ ವಿಪತ್ತುಗಳು ಬಾಧಿಸದು.
ಅಲ್ಲದೆ ನಿನ್ನನ್ನು ನಂಬಿದವರು ಬೇರೆಯವರಿಗೆ ಆಶ್ರಯವನ್ನು ಕೊಡಲು ಸಮರ್ಥರಾಗುತ್ತಾರೆ.
ಕೋಟದವರಾದ ನಮ್ಮ ಪೂರ್ವಜರೆಲ್ಲರೂ ಹೋಮ, ಹವನ, ಪೂಜಾದಿಗಳಿಗೆ ಒತ್ತು ನೀಡಿದವರು.
ಅದಕ್ಕಾಗಿಯೇ ಲೋಕಾದಿತ್ಯರಿಂದ ಗೋದಾವರೀ ತೀರದಿಂದ ಕರೆತರಲ್ಪಟ್ಟು ಕೋಟದ 14 ಗ್ರಾಮಗಳಲ್ಲಿ ನೆಲೆಸಿದವರು.
ಹಿಂದೆ ಪ್ರತಿಯೊಂದು ಕುಟುಂಬದಲ್ಲೂ ಪ್ರತಿ ತಿಂಗಳೂ ದೀಪಾರಾಧನೆಯ ಮೂಲಕ ಕೇಪಳ ಹೂವಿನಿಂದ ಶ್ರೀ ದುರ್ಗಾರಾಧನೆ ನಡೆದು
ಅಂತ್ಯದಲ್ಲಿ ಹೋಮದಿಂದ ಸಂಪನ್ನಗೊಳ್ಳುತ್ತಿತ್ತು.
ಕಾಲಕ್ರಮೇಣ ಸಮಯದ ಹೊಂದಾಣಿಕೆಗಾಗಿ ಅದು ಮೂರು, ಒಂದು ಆಗಿ, ಈಗ ಬಹುಶಃ ಪ್ರತಿ ಕುಟುಂಬದಲ್ಲಿ ಕಣ್ಮರೆಯಾಗುವ ಕಾಲ ಬಂದಿದೆ.
ಕಾರಣ ಈ ಒತ್ತಡದ ಬದುಕಿನಲ್ಲಿ ಎಲ್ಲದಕ್ಕೂ ಸಮಯವಿಲ್ಲ.
ಆದರೆ ನಮ್ಮತನವನ್ನು ಮರೆಯಬಾರದೆಂಬ ಸದುದ್ದೇಶದಿಂದ,
ಕೂಟ ಮಹಾಜಗತ್ತು ಉತ್ತರಹಳ್ಳಿ ಅಂಗ ಸಂಸ್ಥೆಯು ಹಿಂದಿನ ಪರಂಪರೆಯನ್ನು ಸ್ಮರಿಸುತ್ತಾ ಕರ್ಕಾಟಕ ಮಾಸ ದಲ್ಲಿ ವರ್ಷಕ್ಕೊಂದು "ದುರ್ಗಾ ನಮಸ್ಕಾರ ಪೂಜೆ"ಯನ್ನು ಸಾಮೂಹಿಕವಾಗಿ ಆಚರಿಸಿಕೊಂಡು ಬರುತ್ತಿದೆ.
ಮಾನವನ ಅತಿಯಾದ ಆಸೆ-ಆಮಿಷಗಳಿಂದ ಜರ್ಜರಿತವಾದ ಈ ಪರಿಸರದಲ್ಲಿ ಅನೇಕ ಹೊಸ ಹೊಸ ರೋಗಗಳು, ಸಂಕಷ್ಟಗಳು ಎದುರಾಗುತ್ತಿವೆ.
ಇದಕ್ಕೆಲ್ಲ ಪರಿಹಾರ ಆ ದುರ್ಗೆಯಿಂದಲೇ ಸಾಧ್ಯ.
ಬನ್ನಿ ನಮ್ಮ ಸಂಪ್ರದಾಯವನ್ನು ಮಕ್ಕಳಿಗೂ ತೋರಿಸಿ, ಅವರಲ್ಲೂ ಭಕ್ತಿ, ಭಾವ, ಶ್ರದ್ಧೆಯನ್ನು ಹುಟ್ಟುವಂತೆ ಮಾಡೋಣ.
📅 ದಿನಾಂಕ : 19/07/2026, ಭಾನುವಾರ ಸಂಜೆ ೪.೩೦ ರಿಂದ
📍 ಸ್ಥಳ : ಶ್ರೀ ಗುರುನರಸಿಂಹ ಕಲ್ಯಾಣ ಮಂಟಪ
ಮನೆಮಂದಿಯೆಲ್ಲ ಭಾಗಿಗಳಾಗಿ ಶ್ರೀ ದುರ್ಗೆಯ ಅನುಗ್ರಹವನ್ನು ಪಡೆಯೋಣ.
- ಕೂಟ ಮಹಾಜಗತ್ತು, ಉತ್ತರಹಳ್ಳಿ ಅಂಗಸಂಸ್ಥೆ
ಶ್ರೀ ಕೆ. ನರಸಿಂಹ ಐತಾಳ್ ಮತ್ತು ಶ್ರೀ. ಪಿ. ಭಾಸ್ಕರ ರಾವ್, ಬೆಂಗಳೂರು ಮತ್ತು ತಂಡದಿಂದ ಚೆಂಡೆವಾದನ
ವಿ. ಸೂ.
1. ದುರ್ಗಾ ನಮಸ್ಕಾರ ಪೂಜೆಗೆ ಪ್ರಮುಖ ಪ್ರಯೋಜಕರಾಗಲು ಬಯಸುವ ಬಂಧುಗಳು ಅಂಗಸಂಸ್ಥೆಯ ಅಧ್ಯಕ್ಷರು, (9845374670) ಅಥವಾ ಕಾರ್ಯದರ್ಶಿ (9448071136)ಯನ್ನು ಸಂಪರ್ಕಿಸಬೇಕಾಗಿ ವಿನಂತಿ.
2. ದೇಣಿಗೆಯನ್ನು ಈ ಕೆಳಕಂಡ ಬ್ಯಾಂಕ್ ಖಾತೆಗೆ ಹಸ್ತಾಂತರಿಸಬಹುದು.
ಬ್ಯಾಂಕ್ : ದಿ ಕರ್ನಾಟಕ ಬ್ಯಾಂಕ್ ಲಿ.
ಶಾಖೆ : ಅಮರಜ್ಯೋತಿನಗರ
ಖಾತೆ ಸಂಖ್ಯೆ : 1042500100892901
NEFT ಸಂಖ್ಯೆ : KARB0000124
MICR ಸಂಖ್ಯೆ : 560052039