27ನೇ ವಾರ್ಷಿಕ ಮಹಾಸಭೆಯ ಆಹ್ವಾನ
ಗೌರವಾನ್ವಿತ ಸದಸ್ಯರೇ,
ದಿನಾಂಕ 19.07.2026ನೇ ಭಾನುವಾರ ಮಧ್ಯಾಹ್ನ 03.00 ಗಂಟೆಗೆ ನಮ್ಮ ಅಂಗಸಂಸ್ಥೆಯ 27ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಸಭೆಯು ಶ್ರೀ ಗುರುನರಸಿಂಹ ಕಲ್ಯಾಣ ಮಂದಿರ, ನಂ. 12, ಬುಲ್ ಟೆಂಪಲ್ ರಸ್ತೆ, ಬಸವನಗುಡಿ, ಬೆಂಗಳೂರು–560 004ರಲ್ಲಿ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೆ. ಕೆ. ಕೇಶವ ಹೊಳ್ಳರವರ ಅಧ್ಯಕ್ಷತೆಯಲ್ಲಿ ಕೇಂದ್ರದ ಅಧ್ಯಕ್ಷರಾದ ಹೆಚ್. ಸತೀಶ್ ಹಂದೆಯವರ ಉಪಸ್ಥಿತಿಯಲ್ಲಿ ನಡೆಯಲಿರುವುದು. ಆತ್ಮೀಯರಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗಿ ವಿನಂತಿ.
ಕಾರ್ಯಕಾರಿ ಮಂಡಳಿಯ ಪರವಾಗಿ
ಬಿ. ಚಂದ್ರಶೇಖರ ಐತಾಳ್
ಕಾರ್ಯದರ್ಶಿ
ಕಾರ್ಯಸೂಚಿ
1. ಪ್ರಾರ್ಥನೆ
2. ಸ್ವಾಗತ
3. ಸಂತಾಪ ಸೂಚನೆ
4. ಕಳೆದ ಸಭೆಯ ಕಾರ್ಯಕಲಾಪಗಳ ವರದಿ ದೃಢೀಕರಣ
5. 2024–2025ನೇ ಸಾಲಿನ ಸರ್ವ ಸದಸ್ಯರ ಸಭೆಯ ವರದಿ ಶಿಫಾರಸು
6. 2025–2026ನೇ ಸಾಲಿನ ಆಡಳಿತ ಮಂಡಳಿಯ ವರದಿ ಹಾಗೂ ಅನುಮೋದನೆ
7. 2025–2026ನೇ ಸಾಲಿನ ಲೆಕ್ಕಪರಿಶೋಧಿತ ವಾರ್ಷಿಕ ವರದಿ ಹಾಗೂ ಅನುಮೋದನೆ
8. 2026–2027ನೇ ಸಾಲಿನ ಆಯ-ವ್ಯಯ ಮಂಜೂರಾತಿ ಹಾಗೂ ಅನುಮೋದನೆ
9. 2026–2027ನೇ ಸಾಲಿನ ಆಡಿಟರ್ ನೇಮಕ
10. ಸಹಕಾರ ಇಲಾಖೆಯ ಪ್ರತಿನಿಧಿಗಳ ಭಾಷಣ
11. ಅಧ್ಯಕ್ಷರ ಹಾಗೂ ಹಿರಿಯರ ಮಾರ್ಗದರ್ಶನ
12. ಅಧ್ಯಕ್ಷರ ಭಾಷಣ
13. ವಂದನಾರ್ಪಣೆ
14. ರಾಷ್ಟ್ರ ಗೀತೆ
ಭಾಷಣ ಉಪಹಾರ : ಮಧ್ಯಾಹ್ನ 2.30ಕ್ಕೆ