2026ನೇ ಸಾಲಿನ ವಾರ್ಷಿಕ ಕ್ರೀಡಾಮಿಲನ
ಆತ್ಮೀಯರೇ,
ಕೂಟ ಮಹಾಜಗತ್ತು ಸಾಲಿಗ್ರಾಮ (ರಿ.) ಉತ್ತರಹಳ್ಳಿ ಅಂಗಸಂಸ್ಥೆಯ ಆಶ್ರಯದಲ್ಲಿ ದಿನಾಂಕ 28.06.2026 ಭಾನುವಾರ ಬೆಳಿಗ್ಗೆ 9.00 ರಿಂದ ಸಂಜೆ 5.00ರವರೆಗೆ ವಾರ್ಷಿಕ ಕ್ರೀಡಾಮಿಲನ ಕಾರ್ಯಕ್ರಮವನ್ನು ಜಯನಗರದ ಬಿ.ಇ.ಎಸ್. ಕಾಲೇಜ್ ಆಟದ ಮೈದಾನದಲ್ಲಿ ಏರ್ಪಡಿಸಲಾಗಿದೆ. ನಮ್ಮ ಸಂಘದ ಎಲ್ಲಾ ಸದಸ್ಯರು, ತಮ್ಮ ಮನೆ ಮಕ್ಕಳೊಂದಿಗೆ ಈ ಕ್ರೀಡಾ ಮಿಲನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗಿ ವಿನಂತಿ. ಬನ್ನಿ, ನಾವೆಲ್ಲರೂ ಜೊತೆಯಾಗಿ ಈ ಕ್ರೀಡಾ ದಿನವನ್ನು ಯಶಸ್ವಿಗೊಳಿಸೋಣ.
ಕಾರ್ಯಕ್ರಮದ ವಿವರ
ಬೆಳಿಗ್ಗೆ 9.00 ಕ್ಕೆ : ಸ್ಪರ್ಧಾಳುಗಳ ನೋಂದಣಿ
ಬೆಳಿಗ್ಗೆ 9.30 ಕ್ಕೆ : ಉದ್ಘಾಟನ ಸಮಾರಂಭ
ಬೆಳಿಗ್ಗೆ10.00 ಕ್ಕೆ : ಆಟೋಟ ಸ್ಪರ್ಧೆಗಳ ಪ್ರಾರಂಭ
ಮಧ್ಯಾಹ್ನ 12.45 ಕ್ಕೆ : ಭೋಜನ
ಮಧ್ಯಾಹ್ನ 1.45 ಕ್ಕೆ : ಆಟೋಟ ಸ್ಪರ್ಧೆಗಳ ಮುಂದುವರಿಕೆ
ಮಧ್ಯಾಹ್ನ 3.45 ಕ್ಕೆ ಚಹಾ ವಿರಾಮ
ಸಂಜೆ 4.00 ಕ್ಕೆ : ಮನೋರಂಜನಾ ಆಟೋಟಗಳು
ಕ್ರೀಡಾ ಸ್ಪರ್ಧೆಗಳು
ಮಕ್ಕಳಿಗೆ
1. ಪೊಟಾಟೋ ರೇಸ್
2. 50 ಮೀಟರ್ ಓಟ
3. ಕಪ್ಪೆ ಓಟ
4. 50 ಮೀಟರ್ ಓಟ (ಒಂದು ಕಾಲಿನಲ್ಲಿ)
5. ಚೆಂಡು ಎಸೆಯುವುದು
ಮಹಿಳೆಯರಿಗೆ
1. ಓಡುತ್ತಾ ಸೂಜಿಗೆ ನೂಲು ಹಾಕುವುದು (18 ರಿಂದ 30 ವರ್ಷ)
2. 100 ಮೀಟರ್ ಓಟ (18 ರಿಂದ 30 ವರ್ಷ)
3. 100 ಮೀಟರ್ ಓಟ (30 ರಿಂದ 50 ವರ್ಷ)
4. ತಲೆಯ ಮೇಲೆ ಪುಸ್ತಕ ಇಟ್ಟುಕೊಂಡು ಓಡುವುದು (50 ವರ್ಷ ಮೇಲ್ಪಟ್ಟು)
5. ಲಿಂಬೆ ಚಮಚ ಓಟ
ರಿಲೆ-ಇಬ್ಬರು ಮಾತ್ರ - 30ರಿಂದ 50 ವರ್ಷ)
6. ಥೋಬಾಲ್ (ತಂಡಗಳಲ್ಲಿ)
ಮನೋರಂಜನಾ ಕ್ರೀಡೆಗಳು (ಎಲ್ಲರಿಗೆ)
1. ಬೌಂಡಿಂಗ್ ದಿ ಸಿಟಿ
2. ಬ್ರೇಕಿಂಗ್ ದಿ ಪಾಟ್
3. ಹಗ್ಗ ಜಗ್ಗಾಟ
ಪುರುಷರಿಗೆ
1. ಕ್ರಿಕೆಟ್ (12 ವರ್ಷ ಮೇಲ್ಪಟ್ಟವರಿಗೆ)
2. ವಾಲಿಬಾಲ್ (14ವರ್ಷ ಮೇಲ್ಪಟ್ಟವರಿಗೆ)
3. 100 ಮೀಟರ್ ಓಟ (18 ರಿಂದ 30 ವರ್ಷ)
4. 100 ಮೀಟರ್ ಓಟ (೨೬ ರಿಂದ 35 ವರ್ಷ)
5. 100 ಮೀಟರ್ ಓಟ (18 ರಿಂದ 30 ವರ್ಷ)
6. ನಡಿಗೆ ಸ್ಪರ್ಧೆ (60ವರ್ಷ ಮೇಲ್ಪಟ್ಟವರಿಗೆ)
7. ಶಾಟ್ ಪುಟ್ ಎಸೆತ (ಎಲ್ಲಾ ವಯಸಿನವರಿಗೆ)
ವಿಶೇಷ ಸೂಚನೆ:
1. ಮೇಲೆ ತಿಳಿಸಿದ ಸ್ಪರ್ಧೆಗಳಲ್ಲದೆ ಸಂದರ್ಭಾನುಸಾರವಾಗಿ ಬದಲಾವಣೆಗಳನ್ನು ಮಾಡಿದಲ್ಲಿ ಸಹಕರಿಸಬೇಕಾಗಿ ವಿನಂತಿ.
2. ಬೆಳಿಗ್ಗೆ 9.30 ಗಂಟೆಯ ಒಳಗೆ ಕ್ರೀಡಾಸ್ಪರ್ಧೆಗೆ ಹೆಸರು ಕೊಟ್ಟವರಿಗೆ ಅವಕಾಶ